ಪುತ್ತೂರು: ನಾಪತ್ತೆಯಾದ ವ್ಯಕ್ತಿಯೋರ್ವರ ಮೃತದೇಹ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ಜು.17 ರಂದು ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿ ನಡೆದಿದೆ.

ಮಂಗಳೂರು ನಿವಾಸಿ ಆನಂದ ರೈ(53) ಮೃತ ವ್ಯಕ್ತಿ.
ಆನಂದ ರೈ ರವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ಕಳೆದ ಕೆಲ ದಿನಗಳಿಂದ ಕಕ್ಕಪ್ಪಾಡಿ ಸಮೀಪದ ದೇಲಂಪಾಡಿಯಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ವಾಸವಿದ್ದರು. ಜು.17 ರಂದು ಮುಂಜಾನೆಯಿಂದಲೇ ಆನಂದ್ ರವರು ಮನೆಯಲ್ಲಿ ಕಾಣದೆ ಇದ್ದ ಹಿನ್ನೆಲೆ ಮನೆಯವರು ಸುತ್ತಮುತ್ತ ಹುಡುಕಾಡಿ ಪತ್ತೆಯಾಗದ ಕಾರಣ ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಅವರ ಮೃತದೇಹವು ಕಕ್ಕಪ್ಪಾಡಿ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಮನೆಯವರು, ಸ್ಥಳೀಯರು ಮತ್ತು ಪೊಲೀಸರು ಸೇರಿಕೊಂಡು ಹುಡುಕಾಟ ನಡೆಸಿದ ವೇಳೆ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಯೇ ಅಥವಾ ಆಕಸ್ಮಿಕವಾಗಿ ಬಿದ್ದರೆ ಎಂದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ..




























