ಪುತ್ತೂರು : ಮಾ. 31ರ ಆರೋಗ್ಯ ಇಲಾಖೆಯ ವರದಿಯಿಂದ, ಪುತ್ತೂರಿನ ಪತ್ರಕರ್ತರೊಬ್ಬರು ಸೇರಿದಂತೆ ಪುತ್ತೂರು ಕಡಬದಲ್ಲಿ 6 ಮಂದಿಗೆ ಕೊರೊನಾ ಸೋಂಕು ದೃಢಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ. ಪುತ್ತೂರು ತಾಲೂಕಿನ ಬನ್ನೂರಿನ 64 ವರ್ಷದ ಪುರುಷ, ಬೊಳುವಾರಿನ 51 ವರ್ಷದ ಪುರುಷ, ಸರ್ವೆಯ 12 ವರ್ಷದ ಬಾಲಕಿ, ಮುಂಡೂರಿನ 70 ವರ್ಷದ ವೃದ್ಧ, ಬನ್ನೂರಿನ 63 ವರ್ಷದ ಪುರುಷ ಹಾಗೂ ಕಡಬ ತಾಲೂಕಿನ ಉದನೆಯ 21 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಗೊಂಡಿದೆ.