ಬೆಂಗಳೂರು: ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ಕೈಕಾರ ರವರು ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಕಬಡ್ಡಿ ತಂಡಕ್ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ಕರ್ನಾಟಕ ತಂಡವನ್ನು ಪ್ರಶಾಂತ್ ರೈ ಅವರು ಮುನ್ನಡೆಸಲಿದ್ದಾರೆ.
ಹರಿಯಾಣದ ಚಾರ್ಕಿ ದಾದ್ರಿಯಲ್ಲಿ ಜುಲೈ 21ರಿಂದ ಜುಲೈ 24ರವರೆಗೆ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಲಿವೆ. ಪ್ರೋ ಕಬ್ಬಡಿಯಲ್ಲಿ ಆಡಿರುವ ಸ್ಟಾರ್ ಆಟಗಾರರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಕರ್ನಾಟಕ ತಂಡ ಹೀಗಿದೆ:
- ಪ್ರಶಾಂತ್ ರೈ (ನಾಯಕ)
- ಸುಕೇಶ್ ಹೆಗ್ಡೆ
- ರತನ್ ಗೌಡ
- ಎಸ್. ರಕ್ಷೀತ್
- ಸಚಿನ್ ಸುವರ್ಣ
- ಪಿ. ಸಚಿನ್
- ಅರ್ಮುಗಂ
- ಸೋಮ
- ರಾಕಿ ಗಣೇಶ್
- ಆಫ್ರೀದ್ ಮಹಮ್ಮದ್
- ನರೇಂದ್ರ
- ಎನ್. ಅಭಿಷೇಕ್


























