ಪುತ್ತೂರು: ತಾಲೂಕಿನ ಪಾಣಾಜೆ ಗ್ರಾಮದ ಗೊಳಿತ್ತಡಿ ನಾರಾಯಣ ರೈಯವರ ಮನೆಗೆ ಗುಡ್ಡ ಕುಸಿದು ಬಿದ್ದು ಮನೆ ಹಾನಿಯಾಗಿದ್ದು, ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ ಅಶೋಕ್ ಕುಮಾರ್ ರೈ ರವರು ಮನೆ ದುರಸ್ತಿಗಾಗಿ ಆರ್ಥಿಕ ನೆರವು ನೀಡಿದರು.

ಮನೆ ದುರಸ್ತಿಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್ ಅನ್ನು ಹಸ್ತಾಂತರಿಸಿದರು. ಈ ವೇಳೆ ಎಸ್ ಸಿ ಡಿ ಸಿಸಿ ಬ್ಯಾಂಕ್ ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಿತ ಹಲವರು ಉಪಸ್ಥಿತರಿದ್ದರು.



























