ಪುತ್ತೂರು: ಖ್ಯಾತ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ, ಕರ್ನಾಟಕ ರಾಜ್ಯ ಕಬಡ್ಡಿ ತಂಡದ ನೂತನ ನಾಯಕ, ಬ್ಯಾಂಕ್ ಬರೋಡದ ಉದ್ಯೋಗಿಯಾಗಿರುವ ಪ್ರಶಾಂತ್ ರೈ ಕೈಕಾರ ರವರಿಗೆ ಬ್ಯಾಂಕ್ ಆಫ್ ಬರೋಡದ ವತಿಯಿಂದ ‘ಅತ್ಯುತ್ತಮ ಕ್ರೀಡಾ ಸಾಧನಾ ಪ್ರಶಸ್ತಿ’ ಯನ್ನು ನೀಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಪ್ರಶಾಂತ್ ರೈ ಕೈಕಾರ ರವರ ಸಾಧನೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಪ್ರಶಸ್ತಿಯನ್ನು ನೀಡಲಾಗಿದೆ.
ಮುಂಬೈನಲ್ಲಿ ನಡೆದ ಬ್ಯಾಂಕ್ ಆಫ್ ಬರೋಡದ 115ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಾಂತ್ ರೈ ರವರಿಗೆ ಅತ್ಯುತ್ತಮ ಕ್ರೀಡಾ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ..



























