ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ವಿಡಿಯೋ ಕಿಸ್ಸಿಂಗ್ ವೀಡಿಯೊ ವೈರಲ್ ಆಗಿದ್ದು, ಹುಡುಗರ ಕೊಠಡಿಗೆ ತೆರಳಿ ಕಿಸ್ಸಿಂಗ್ ಸ್ಪರ್ಧೆ ಅನ್ನೋ ಹೆಸರಿನಲ್ಲಿ ಖುಲ್ಲಾಂಖುಲ್ಲಾ ಚುಂಬಿಸಿದ್ದರು. ಈ ವೀಡಿಯೊ ವೈರಲ್ ಆಗ್ತಾ ಇದ್ದಂತೆ ಅಲರ್ಟ್ ಆದ ಮಂಗಳೂರು ಸಿಸಿಬಿ ಪೊಲೀಸರು ವಿಡಿಯೋದ ಜಾಡು ಹಿಡಿದಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯನ್ನ ವಶಕ್ಕೆ ಪಡೆದಿದ್ದಾರೆ.
ಆತನ ವಿಚಾರಣೆ ನಡೆಸುತ್ತಿರುವಾಗಲೇ ಮತ್ತೊಂದು ವಿಡಿಯೋ ಪತ್ತೆಯಾಗಿದ್ದು, ಅದನ್ನೂ ಆತ ಸಾಮಾಜಿಕತಾಣಗಳಲ್ಲಿ ವೈರಲ್ ಮಾಡಿರೋದು ಬೆಳಕಿಗೆ ಬಂದಿದೆ.
ಕಿಸ್ಸಿಂಗ್ ಸ್ಪರ್ಧೆ ಹೆಸರಿನಲ್ಲಿ ಲಿಪ್ ಲಾಕ್ ಮಾಡಿದ ಬಳಿಕ ವಿದ್ಯಾರ್ಥಿನಿಯೊಬ್ಬಳು ವಿದ್ಯಾರ್ಥಿ ಜೊತೆಗೆ ಪೂರ್ತಿ ನಗ್ನವಾಗಿ ಸೆಕ್ಸ್ ಮಾಡ್ತಿರೋ ವಿಡಿಯೋ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಉಳಿದ ವಿದ್ಯಾರ್ಥಿಗಳನ್ನ ಪತ್ತೆ ಮಾಡಿ ಬಂಧಿಸಲು ಸಿದ್ದತೆ ನಡೆಸಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಖಾಸಗಿ ಕಾಲೇಜು ಆಡಳಿತ ಗಂಭೀರವಾಗಿ ಪರಿಗಣಿಸಿದೆ. ವೀಡಿಯೊದಲ್ಲಿ ಮೂವರು ಯುವಕರು ಮತ್ತು ಮೂವರು ವಿದ್ಯಾರ್ಥಿನಿಯರಿದ್ದು, ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ.
ಮೂವರು ವಿದ್ಯಾರ್ಥಿನಿಯರು ಕಾಲೇಜು ಸಮವಸ್ತ್ರ ಮತ್ತು ಐಡಿ ಕಾರ್ಡ್ ಸಹಿತ ಇದ್ದು, ಉಳಿದ ಮೂವರು ಯುವಕರು ಸಮವಸ್ತ್ರದಲ್ಲಿರಲಿಲ್ಲ . 20 ಸೆಕೆಂಡ್‌ಗಳ ಕಿಸ್ಸಿಂಗ್ ವಿಡಿಯೋವನ್ನ ಯಾವುದೋ ಖಾಸಗಿ ರೂಮ್‌ನಲ್ಲಿ ತೆಗೆಯಲಾಗಿದೆ. ಮತ್ತೊಂದು ಸೆಕ್ಸ್ ವಿಡಿಯೋ ಕೂಡ ಇದ್ದು. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ ಇರೋ ಕೊಠಡಿಯಂತೆ ಕಾಣುತ್ತಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಿರೋ ಸಾಧ್ಯತೆ ಇದೆ..


























