ವಿಟ್ಲ: ಹತ್ಯೆ ಮಾಡುವ ಉದ್ದೇಶದಿಂದ ಆಲ್ಟೊ ಕಾರಿನಲ್ಲಿ ಗೋವುಗಳನ್ನು ಹಿಂಸಾತ್ಮಕ ಕೊಂಡೊಯ್ಯುವಂತಹ ಘಟನೆ ವಿಟ್ಲದ ಕೋಡಂದೂರು ಎಂಬಲ್ಲಿ ನಡೆದಿದ್ದು, ಈ ಘಟನೆಯನ್ನು ಶಾಸಕ ಸಂಜೀವ ಮಠಂದೂರು ರವರು ತೀವ್ರವಾಗಿ ಖಂಡಿಸಿದ್ದಾರೆ.
ವಾಹನ ಹಾಗೂ ವಾಹನದ ಮಾಲಕರನ್ನು ತಕ್ಷಣ ಬಂಧಿಸಿ ಸುರತ್ಕಲ್ ಗಂಜೀಮಠ ಮಾದರಿಯಲ್ಲಿ ಆರೋಪಿಗಳ ಆಸ್ತಿ ಜಪ್ತಿ ಮಾಡಬೇಕೆಂದು ಹಿಂದೂ ಸಂಘಟನೆ ಕಾರ್ಯಕರ್ತರು ಬಹುದಿನಗಳಿಂದ ಆಗ್ರಹಿಸುತ್ತಿದ್ದು, ಇದಕ್ಕೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯಿಸಿದ್ದಾರೆ.

ಯುಪಿ ಮಾದರಿಯಲ್ಲಿ ಆಸ್ತಿ ಮುಟ್ಟುಗೋಲು; ಹಿಂದೂ ಪರ ಸಂಘಟನೆಗೆ ಬೆಂಬಲ ಸೂಚಿಸಿದ ಮಠಂದೂರು:
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸ್ಫೂರ್ತಿ ಪಡೆದಂತೆ, ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲೂ ಕೂಡ ಆಸ್ತಿ ಮುಟ್ಟುಗೋಲಿಗೆ ಯೋಜನೆಗಳು ಸಜ್ಜಾಗುತ್ತಿವೆ. ನೂತನ ಗೋ ಹತ್ಯಾ ನಿಷೇಧ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಪೊಲೀಸರು ಬಂಧಿಸಬೇಕು. ಇಂತಹ ಕೃತ್ಯಗಳಿಂದ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಯಿದೆ, ಸರಕಾರ ಜಾರಿ ಮಾಡಿರುವ ಗೋ ಹತ್ಯೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು. ಯಾರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೋ ಅವರ ಆಸ್ತಿಯನ್ನು ಮುಟ್ಟಗೋಲು ಮಾಡಬೇಕು. ಗೋಹತ್ಯೆ ತಡೆಯುವ ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಾನಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


























