ಸುಳ್ಯ: ಬೆಳ್ಳಾರೆ ಕಳಂಜದ ದಿನಗೂಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದ ಘಟನೆಯನ್ನು ಪುತ್ತೂರು ನಗರಸಭಾ ಸದಸ್ಯ ಮೊಹಮ್ಮದ್ ರಿಯಾಝ್ ಪರ್ಲಡ್ಕ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪೋಲಿಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ನೈಜ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಹಾಗೂ ರಾಜ್ಯ ಸರಕಾರವು ತಾರತಮ್ಯ ನೀತಿ ತಾಳದೆ ತಕ್ಷಣದಲ್ಲೇ ಮೃತ ಯುವಕನ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಘೋಷಿಸಿ ಜಿಲ್ಲೆಯ ಶಾಂತಿಗೆ ಭಂಗ ಬರದಂತೆ ನೋಡಿಕೊಳ್ಳಬೇಕು ಎಂದು ಗೃಹ ಇಲಾಖೆಯನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೃತ ಮಸೂದ್ ಕುಟುಂಬಕ್ಕೆ ತನ್ನ ಎರಡು ತಿಂಗಳ ಗೌರವಧನವನ್ನು ನೀಡುವುದಾಗಿ ಘೋಷಿಸಿ ಮಾದರಿಯಾದರು. ಈ ಹಿಂದೆಯೂ ರಿಯಾಝ್ ಅವರು ಇದೇ ರೀತಿ ತನ್ನ ಗೌರವಧನವನ್ನು ಅನ್ಯಾಯಕ್ಕೊಳಗಾದ ಹಲವು ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.


























