ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗ್ರಾಹಕರ ಸಂಘದ ಉದ್ಘಾಟನೆ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಾಸ್ಟರ್ ವೈಭವ್ ವಹಿಸಿದ್ದರು. ಅತಿಥಿಗಳಾಗಿ ಪ್ರಾಂಶುಪಾಲರು ಜಯರಾಮ್ ರೈ, ಆಡಳಿತಾಧಿಕಾರಿ ರಾಧಾಕೃಷ್ಣ ಎ ಹಾಗೂ ಉಪ ಪ್ರಾಂಶುಪಾಲೆಯಾದ ಹೇಮಲತಾ ರವರು ಉಪಸ್ಥಿತರಿದ್ದರು.

ಗ್ರಾಹಕ ಸಂಘದ ಉದ್ಘಾಟನೆಯನ್ನು ಮಾಡಿದ ಪ್ರಾಂಶುಪಾಲರು ಮಾತನಾಡಿ, ಗ್ರಾಹಕ ಸಂಘದ ಜವಾಬ್ದಾರಿ ಹಾಗೂ ಕಾರ್ಯಕ್ರಮಗಳನ್ನು ವಿವರಿಸಿದರು. ಮಕ್ಕಳು ಗ್ರಾಹಕ ಸಂಘದಲ್ಲಿ ಪಡೆದ ಜ್ಞಾನವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನವನ್ನು ಮಾಡಬೇಕೆಂಬ ಕರೆ ಕೊಟ್ಟರು.

ಸಿಂಚನ ರವರು ವಿದ್ಯಾರ್ಥಿ ಗ್ರಾಹಕ ಸಂಘದ ವಾರ್ಷಿಕ ಚಟುವಟಿಕೆಯನ್ನು ಸಭೆಯ ಮುಂದಿಟ್ಟರು. ಸಮರ್ಥ್ ರವರು ವರದಿ ವಾಚಿಸಿದರು. ಕಾರ್ಯಕ್ರಮವನ್ನು ಮುನಾಜಾ ರವರು ಸ್ವಾಗತಿಸಿ, ರಕ್ಷಾ ರವರು ವಂದಿಸಿದರು. ಕಾರ್ಯಕ್ರಮವನ್ನು ನೆಬಿಸತ್ ಹಿಬಾ ರವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೊಡಲ್ ಶಿಕ್ಷಕರಾದ ಗುರುವಪ್ಪ ನಾಯ್ಕ್, ರೇಖಾ,ಧನಲಕ್ಷ್ಮಿ ರವರು ಉಪಸ್ಥಿತರಿದ್ದರು.


























