ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರೋಟರಿಪುರ ನಿವಾಸಿಯಾಗಿರುವ ಸತೀಶ್ ಸುವರ್ಣ ಹಾಗೂ ರೇಖಾ ದಂಪತಿಯ ಪುತ್ರಿಯಾದ ಮಾನ್ವಿತಾ ರವರನ್ನು ರೋಟರಿಪುರ ಬಾಲವಿಕಾಸ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಅಧ್ಯಕ್ಷರಾದ ಗೀತಾ ಚಂದ್ರಶೇಖರ್ ರವರು ಶಾಲು ಹೊದಿಸಿ ಫಲವಸ್ತು ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಪ್ರೇಮಾ, ಲೀಲಾವತಿ, ರೇಖಾ, ಗೀತಾ, ಹಾಗೂ ಮಕ್ಕಳ ತಾಯಂದಿರಾದ ಶುಭ ಎಸ್, ಗೌರಿ, ಶ್ವೇತಾ, ತುಳಸಿ ಮತ್ತು ಮಕ್ಕಳು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸ್ವಾಗತಿಸಿ ವಂದಿಸಿದರು.




























