ಬಂಟ್ವಾಳ: ಪೊಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಗಟ್ಟಿ ಓರ್ವನನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾದ ಘಟನೆ ಬಂಟ್ವಾಳದ ಮೋಂತಿಮಾರ್ ಮಂಚಿಕಟ್ಟೆಯಲ್ಲಿ ನಡೆದಿದೆ.
ಅಬ್ದುಲ್ ಹಮೀದ್(37) ಬಂಧಿತ ಆರೋಪಿ. ಅಬ್ಬಾಸ್ ಮೂಲೆ ಪರಾರಿಯಾದಾತ.
ಜು.24 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ ಐ ಹರೀಶ್ ಎಂ. ಆರ್ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಮೋಂತಿಮಾರ್ ಮಂಚಿಕಟ್ಟೆ ಬಳಿ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಬೆಳಕಿಗೆ ಬಂದಿದ್ದು, ಈ ವೇಳೆ ತಪಾಸಣೆ ನಡೆಸಿದಾಗ ವಾಹನದಲ್ಲಿದ್ದ ಓರ್ವ ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ಒಂದು ಕಪ್ಪು ಬಣ್ಣದ ದನ-1 ಇದರ ಅಂದಾಜು ಬೆಲೆ ರೂ 5,000/- ಇನ್ನೊಂದು ಕಪ್ಪುಮತ್ತು ಕಂದು ಬಣ್ಣದ ಗಂಡು ಕರು-1 ಆಗಿದ್ದು, ಇದರ ಅಂದಾಜು ಬೆಲೆ ರೂ 3,000/- ಮತ್ತೊಂದು ಕಪ್ಪು ಬಣ್ಣದ ಗಂಡು ಕರು ಇದರ ಅಂದಾಜು ಬೆಲೆ ರೂ 1000/- ಆಗ ಬಹುದು ಟೆಂಪೋ ವಾಹನ ಇದರ ಅಂದಾಜು ಬೆಲೆ 1,50,000/- ಆಗಬಹುದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅ.ಕ್ರ 54-2022 ಕಲಂ:-ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020. ಕಲಂ; 5,7 ಮತ್ತು 12 ಹಾಗೂ ಕಲಂ 11(D) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರಂತೆ ಪ್ರಕರಣ ದಾಖಲಾಗಿದೆ.



























