ವಿಟ್ಲ: ಕನ್ಯಾನ ಮಿತ್ತನಡ್ಕ ನಿವಾಸಿ ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ದೀಕ್ಷಿತ್ ನಾಯಕ್ (25) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.25 ರಂದು ನಿಧನರಾದರು.

ದೀಕ್ಷಿತ್ ರವರ ತಂದೆ ಕಳೆದ ವರ್ಷ ಅಸೌಖ್ಯದಿಂದ ಮರಣ ಹೊಂದಿದ್ದರು. ಏಕೈಕ ಪುತ್ರನಾಗಿದ್ದ ಇವರು ತಂದೆಯ ಹೋಟೆಲ್ ಮತ್ತು ಶಾಪ್ ಅನ್ನು ಮುನ್ನಡೆಸುತ್ತಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣವನ್ನು ಪಡೆದಿದ್ದ ದೀಕ್ಷಿತ್ ಈ ಮೊದಲು ಮಾಣಿಲ ಗ್ರಾಮದ ಪ್ರತಿಯೊಂದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು.
ಮೃತರು ತಾಯಿ, ಸಹೋದರಿ ಮತ್ತು ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ.