ಕಡಬ: ವಿದ್ಯುತ್ ಶಾಕ್ ತಗುಲಿ ಯುವಕ ಮೃತಪಟ್ಟ ಘಟನೆ ಜು.26 ರಂದು ಕಡಬ ತಾಲೂಕಿನ ಶಿರಾಡಿ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ಅಡ್ಡಹೊಳೆ ನಿವಾಸಿ ಮೋನುಚ್ಚ ಎಂಬವರ ಪುತ್ರ ರೋಫಿನ್(15) ಮೃತ ಯುವಕ.
ರೋಫಿನ್ ಮಧ್ಯಾಹ್ನ ವೇಳೆ ಮನೆಯಲ್ಲಿ ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಗಂಭೀರ ಸ್ಥಿತಿಗೆ ತಲುಪಿದ್ದು,ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದೊಯ್ಯಿದರಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.



























