ಪುತ್ತೂರು: ಮನೆಯಿಂದ ಸಂಗ್ರಹವಾಗುವ ಕಸವನ್ನು ವಿಂಗಡಿಸಿ ಕೊಡುವಂತೆ ಹೇಳಿದ್ದಕ್ಕೆ ವ್ಯಕ್ತಿಯೊಬ್ಬರು ಪೌರ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಕಸ ಸಂಗ್ರಹ ವಾಹನದ ಕೀ ಕಿತ್ತು ಗಲಾಟೆ ಮಾಡಿದ ಘಟನೆ ನೆಹರುನಗರ ಕಾರೆಕ್ಕಾಡು ಸಮೀಪ ನಡೆದಿದೆ.

ರಂಪಾಟ ಮಾಡಿದ ಹಿನ್ನೆಲೆ ಪೌರ ಕಾರ್ಮಿಕರು ವ್ಯಕ್ತಿಯ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.




























