ಬಂಟ್ವಾಳ: ಆಕ್ಟಿವಾಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಘಟನೆ ಜು.28 ರಂದು ಕೊಡಾಜೆ-ವೀರಕಂಭ ರಸ್ತೆಯಲ್ಲಿ ನಡೆದಿದೆ.

ಕೊಡಾಜೆ-ವೀರಕಂಭ ರಸ್ತೆಯಲ್ಲಿ ತೆರಳುತ್ತಿದ್ದ ಆಟೋ ರಿಕ್ಷಾಗೆ ಮುಂಭಾಗದಿಂದ ಬಂದ ಆಕ್ಟಿವಾ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಿಂದಾಗಿ ಆಕ್ಟಿವಾ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.




























