ಪುತ್ತೂರು: ಬೆಳ್ಳಾರೆಯಲ್ಲಿ ಹಿಂದೂ ನಾಯಕ ಪ್ರವೀಣ್ ನೆಟ್ಟಾರು ರವರನ್ನು ಹತ್ಯೆ ಮಾಡಿದ ಜಿಹಾದಿ ಗ್ಯಾಂಗ್ ಹಿಂದೆ ಎಸ್.ಡಿ.ಪಿ. ಐ ಮತ್ತು ಪಿ.ಎಫ್.ಐ. ಸಂಘಟನೆಗಳು ಸಕ್ರಿಯವಾಗಿದ್ದು, ಶಿವಮೊಗ್ಗ ಹರ್ಷ ಹತ್ಯೆ, ಹಿಂದೂ ಯುವಕರ ಕೊಲೆಯತ್ನ ಪ್ರಕರಣಗಳ ಹಿಂದೆ ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳು ಪೂರ್ವ ನಿಯೋಜಿತವಾಗಿದ್ದು ಇಸ್ಲಾಮಿಕ್ ಮೂಲಭೂತವಾದವನ್ನು ಭಯೋತ್ಪಾದನೆಯನ್ನು ವಿಸ್ತರಿಸುತ್ತಿದ್ದಾರೆ.
ಸದ್ರಿ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾದಳ, ಅಥವಾ ವಿಶೇಷ ತನಿಖಾ ದಳದ ಮುಖಾಂತರ ತನಿಖೆ ನಡೆಸಿ,ನೈಜ ಆರೋಪಿಗಳು ಹಾಗೂ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ಕರಾವಳಿ ಜಿಲ್ಲೆಯ ಎಲ್ಲಾ ಪೊಲೀಸ್ ಇಲಾಖೆ ಗುಪ್ತಚರ ಇಲಾಖೆಗಳಲ್ಲಿ ಸಮರ್ಥ ಅಧಿಕಾರಿಗಳನ್ನು ನೇಮಿಸುವ ಮುಖಾಂತರ ಸಾರ್ವಜನಿಕರಿಗೆ ಧೈರ್ಯ ತುಂಬಬೇಕು. ಕರ್ನಾಟಕದ ಕರಾವಳಿ ಜಿಲ್ಲೆಗಳು ಕೋಮು ಸೂಕ್ಷ್ಮತೆಯಿಂದ ಕೂಡಿರುವ ಪ್ರದೇಶವಾಗಿದ್ದು ಇದು ಕೇರಳದ ಗಡಿ ಜಿಲ್ಲೆಗಳಿಗೆ ಹೊಂದಿಕೊಂಡಿರುವುದರಿಂದ,ಇಸ್ಲಾಮಿಕ್ ಭಯೋತ್ಪಾದನಾ ಸಂಘಟನೆಗಳು,ಭಯೋತ್ಪಾದನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಕ್ರಮ ಗಾಂಜಾ,ಮಾದಕ ವಸ್ತುಗಳ ಮುಖಾಂತರ ನಿರಂತರವಾಗಿ ನಡೆಯುತ್ತಿದ್ದು ಕೇರಳ ಗಡಿಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಿ ಈ ಎಲ್ಲಾ ಆಕ್ರಮಗಳಿಗೆ,ಭಯೋತ್ಪಾದನೆಗೆ ಕಡಿವಾಣ ಹಾಕಬೇಕು ಹಾಗೂ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಅಥವಾ ವಿಶೇಷ ತನಿಖಾದಳ ಸ್ಥಾಪಿಸುವ ಮುಖಾಂತರ ಹಾಗೂ ಉತ್ತರ ಪ್ರದೇಶದ ಮಾದರಿಯಲ್ಲಿ ದುಷ್ಕರ್ಮಿಗಳಿಗೆ ಉಗ್ರ ಶಿಕ್ಷೆ ನೀಡುವ ಕಾರ್ಯ ಮಾಡಬೇಕೇಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತ್ತಡ್ಕ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಉಪಸ್ಥಿತರಿದ್ದರು.



























