Advertisement
Advertisement
Advertisement
Advertisement
Advertisement
ಕಡಬ, ದ.ಕ. ಜಿಲ್ಲೆಯ ಕಡಬ ತಾಲೂಕಿನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಪ್ರವಾಹದ ನೀರಿಗೆ ಬಿದ್ದ ಯುವಕ ಶರೀಫ್ ನನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿ ಮಾನವೀಯತೆ ಮೆರೆಯುವ ಜೊತೆಗೆ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.
Advertisement
Advertisement
ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಮುಂದುವರೆದಿದ್ದು, ಇಂದು ಸುಬ್ರಹ್ಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.
Advertisement
ಹರಿಹರಪಳ್ಳತ್ತಡ್ಕ ಸೇತುವೆ ಮೇಲೆ ಇದ್ದ ಮರಗಳನ್ನು ಜೆಸಿಬಿ ತೆರವುಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಕ್ರೇನ್ ಆಪರೇಟರ್ ಶರೀಫ್ ನಿಯಂತ್ರಣ ತಪ್ಪಿ ಪ್ರವಾಹ ನೀರಿಗೆ ಬಿದ್ದಿದ್ದಾನೆ.
Advertisement
Advertisement
ತಕ್ಷಣವೇ ನದಿಗೆ ಹಾರಿ ಶರೀಫ್ ಅವರನ್ನು ಸೋಮಶೇಖರ್ ಕಟ್ಟೆಮನೆ ರಕ್ಷಿಸಿದ್ದಾರೆ. ಅಶಾಂತಿಯ ವಾತಾವರಣ ಹಾಗೂ ಪರಸ್ಪರ ದ್ವೇಷಕ್ಕೆ ಕಾರಣವಾಗುತ್ತಿರುವ ಕೆಲವೊಂದು ಘಟನೆಗಳ ನಡುವೆಯೇ ಈ ಘಟನೆ ದ.ಕ ಜಿಲ್ಲೆಯ ಸೌಹಾರ್ದತೆಗೆ ಸಾಕ್ಷಿಯಾಗಿದೆ
Advertisement