ಪುತ್ತೂರು: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಕೇಂದ್ರ ಸರಕಾರದ ಯೋಜನೆಯಂತೆ ಉಚಿತ ಕೋವಿಡ್ ಬೂಸ್ಟರ್ ಡೋಸ್ ಅಭಿಯಾನ ಕಾರ್ಯಕ್ರಮ ಆ.3 ರಂದು ನಡೆಯಿತು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಆರೋಗ್ಯ ಇಲಾಖೆಯ ಎ ಎನ್ ಎಮ್ ದಿಶಾ, ಆಶಾ ಕಾರ್ಯಕರ್ತೆ ಜಯಲತಾ, ಸ್ಥಳೀಯರಾದ ರಾಜೇಶ್ ಶೆಟ್ಟಿ, ಸತೀಶ್ ಶೆಟ್ಟಿ, ದಯಾಕರ್ ಹೆಗ್ಡೆ, ರವೀಂದ್ರ , ಸವಿತಾ ದೇವಿ,ರೇವತಿ, ಸತೀಶ್, ಆದರ್ಶ್, ಲಲಿತಾ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ಪಾಂಚಜನ್ಯ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮವನ್ನು ತೇಜಸ್ವಿಯವರು ನಡೆಸಿಕೊಟ್ಟರು.




























