ಪುತ್ತೂರು: ಜೆಸಿಐ ಪುತ್ತೂರು ಗೋ ಗ್ರೀನ್ ವಿಭಾಗದಿಂದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕೊಂಬೆಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಈ ಸ್ಪರ್ಧೆಗಳ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ವಿಶೇಷ ರಕ್ಷಣೆ ನೀಡುವುದರ ಬಗ್ಗೆ ಹಾಗೂ ಸುಡು ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಅಗತ್ಯವಾದ ಆಹಾರ ಕಾಳು ಮತ್ತು ನೀರನ್ನು ಒದಗಿಸುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸಲಾಯಿತು.
ಸಭಾಧ್ಯಕ್ಷತೆಯನ್ನು ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಜೆಸಿ ಸ್ವಾತಿ ಜಗನ್ನಾಥ್ ರೈ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮೆರ್ ಸಿ ಮಮತ ಮೋನಿಸ್, ಸಹ ಶಿಕ್ಷಕಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಜೆಸಿ ತಿಲಕ್ ರಾಜ್ ಸಿ, ಕಾರ್ಯದರ್ಶಿ ಜೆಸಿಐ ಪುತ್ತೂರು, ಜೆಸಿಆರ್ ಟಿ ಶಿಲ್ಪಾ ಪುರುಷೋತ್ತಮ್ ಶೆಟ್ಟಿ, ಜೆಸಿ ಪ್ರಮೀತ, ಜೆಸಿ ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಜೆಸಿ ಜಗನ್ನಾಥ್ ಅರಿಯಡ್ಕ ಸಂಯೋಜನೆ ಮಾಡಿದ್ದರು.