ಬೆಂಗಳೂರು: ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತಂತೆ ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ.
ಪ್ರವೀಣ್ ನೆಟ್ಟಾರು ರವರನ್ನು ಹತ್ಯೆಗೈದಿದ್ದು ಕೇರಳಿಗರಲ್ಲ, ಬದಲಾಗಿ ಸ್ಥಳೀಯರೇ ಎಂಬುದಾಗಿ ಗೃಹ ಸಚಿವರು ಹೇಳಿದ್ದು, ಈ ಹೇಳಿಕೆ ಭಾರೀ ಕುತೂಹಲವನ್ನು ಸೃಷ್ಟಿಸಿದೆ.
ಖಾಸಗಿ ವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾತನಾಡಿರುವ ಅವರು, ಜುಲೈ.26 ರಂದು ರಾತ್ರಿ ಪ್ರವೀಣ್ ನೆಟ್ಟಾರು ರವರ ಕೊಲೆಯಾಗಿತ್ತು. ಬೆಳ್ಳಾರೆ ಗ್ರಾಮದಲ್ಲಿಯೇ ಹತ್ಯೆ ಮಾಡಲಾಗಿದೆ. ಕೊಂದವರು ಕೇರಳದವರು ಎನ್ನಲಾಗಿತ್ತು. ಆದ್ರೇ ಪ್ರವೀಣ್ ನೆಟ್ಟಾರು ರವರನ್ನು ಕೊಂದವರು ಸ್ಥಳೀಯರು, ಕೇರಳದವರು ಅಲ್ಲ ಎಂಬುದಾಗಿ ಹೇಳಿದ್ದಾರೆ. ಈ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಾರುವಿನಲ್ಲಿ ಪ್ರವೀಣ್ ಹತ್ಯೆಯಾದ ಬಳಿಕ, ಬೆಳ್ಳಾರೆಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ಕೂಡ ಘೋಷಣೆ ಮಾಡಿದ್ದರು..


























