ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮವು ಆ.14 ರಂದು ಅಪರಾಹ್ನ ನಡೆಯಲಿದೆ.
ಸಂಜೆ 3 ಗಂಟೆಗೆ ವೀರಕಂಭ-ಮಾಣಿ- ಪಾಣೆಮಂಗಳೂರು ಈ ಮೂರು ಕಡೆಗಳಿಂದ ವಾಹನ ಜಾಥಾದೊಂದಿಗೆ ತೆರಳಿ, ಸಂಜೆ 4 ಗಂಟೆಗೆ ಕಲ್ಲಡ್ಕ ಶ್ರೀ ಸತ್ಯದೇವತಾ ದೈವಸ್ಥಾನದ ಬಳಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಪ್ರೊಫೆಸರ್ ಗಿರಿಧರ ಉಪಾಧ್ಯಾಯ ರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ. ಪ್ರಸಾದ್, ಭಾರತೀಯ ಭೂ ಸೇನಾ ನಿವೃತ್ತ ಯೋಧರಾದ ಅಲೆಕ್ಸ್ ಮೊರಾಸ್ ರವರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.




























