ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆ ಪುತ್ತೂರಿನ ಖ್ಯಾತ ಬಂಗಾರದ ಮಳಿಗೆಯಾದ ‘ಜಿ.ಎಲ್. ಜ್ಯುವೆಲ್ಲರ್ಸ್’ ನಲ್ಲಿ ವಿಶಾಲವಾದ ತಿರಂಗವನ್ನು ಹಾರಿಸಲಾಗಿದೆ..
33 ಅಡಿ ಅಗಲದ 22 ಅಡಿ ಎತ್ತರದ ವಿಶಾಲವಾದಂತಹ ತಿರಂಗವನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಹಾರಿಸಲಾಗಿದ್ದು, ಈ ತ್ರಿವರ್ಣ ಧ್ವಜ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ..
ಈ ತಿರಂಗವು ಪುತ್ತೂರಿನಲ್ಲಿ ಹಾರಿಸಲ್ಪಟ್ಟ ಅತೀ ದೊಡ್ಡ ತಿರಂಗ ಎನ್ನಲಾಗುತ್ತಿದ್ದು, ಹಲವಾರು ಜನ ಈ ತಿರಂಗದ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ..