ಪುತ್ತೂರು: ದ. ಕ. ಜಿ. ಪಂ. ಹಿ ಪ್ರಾ ಶಾಲೆ ಸಾಮೆತಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಯು ವಿಜೃಂಭಣೆಯಿಂದ ನಡೆಯಿತು.

ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರ ಕೋರಿಕೆಯ ಮೇರೆಗೆ ಶಾಲೆಯ ಸ್ಥಾಪಕಧ್ಯಕ್ಷರು ಹಾಗೂ ಟ್ರಸ್ಟಿಯೂ ಆಗಿರುವ ಗೋಪಾಲ ಕೃಷ್ಣ ಭಟ್ ಧ್ವಜಾರೋಹಣವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪಂಚಾಕ್ಷರಿ, ನಗರ ಸಭೆ ಸದಸ್ಯರಾದ ಮನೋಹರ್,ಟ್ರಸ್ಟಿಯಾಗಿರುವ ಪ್ರಸನ್ನ ಕುಮಾರ್ ಶೆಟ್ಟಿ,ವೆಂಕಟ್ ರಾಜ್, ಮಹಾಲಿಂಗೇಶ್ವರ ಭಟ್, ದಿನೇಶ್ ಪ್ರಸನ್ನ,ಶ್ರೀಮತಿ ಮೀನಾಕ್ಷಿ ಡ್ಯಾಶ್ ಮಾರ್ಕೆಟಿಂಗ್ ಸಂಸ್ಥೆಯ ಮಾಲಕರಾದ ನಳಿನಿ ಶೆಟ್ಟಿ, ಸಮಿತಿಯ ಕಾರ್ಯದರ್ಶಿಯಾದ ದಿನೇಶ್ ಕಾಮತ್,ಹಿರಿಯ ವಿದ್ಯಾರ್ಥಿಯಾದ ಲಾನ್ಸಿ ಮಸ್ಕರೇನಸ್, ರೋಟರಿ ಕ್ಲಭ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಧು ನರಿಯೂರು, ನಿವೃತ್ತ ಶಿಕ್ಷಕಿ ಹಿಲ್ದಾ ಮೇಡಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಯೋಗೀಶ್ವರಿ,ಯುವಕ ಮಂಡಲದ ಪ್ರತಿನಿಧಿಗಳು,ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ದೀಪ ಬೆಳಗಿಸುವುದರ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ನಡೆಯಿತು. ಯುವಕ ಮಂಡಲದ ವತಿಯಿಂದ ಸಿರಾಜ್ ನೇತೃತ್ವದಲ್ಲಿ ಬೆಳಗ್ಗಿನ ಉಪಹಾರದ ವ್ಯವಸ್ಥೆಯನ್ನು ಮಾಡಿದರು. ಸಿಝ್ಲರ್ ವತಿಯಿಂದ ಪಾನೀಯದ ವ್ಯವಸ್ಥೆಯನ್ನು ಮಾಡಿದರು. ಹಿರಿಯ ವಿದ್ಯಾರ್ಥಿಯಾದ ಫಾಯಾಜ್, ಟ್ರಸ್ಟಿಯಾದ ಇಂದಿವರ್ ಭಟ್ ಶಾಲೆಯ ಅಲಂಕಾರದಲ್ಲಿ, ಸಿದ್ಧತೆಯಲ್ಲಿ ಸಹಕರಿಸಿದರು. ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು ಮುಖ್ಯ ಗುರುಗಳಾದ ಮೀನಕುಮಾರಿ ಸ್ವಾಗತಿಸಿ, ಸಹಶಿಕ್ಷಕಿ ಮರಿಯಾ ಎಂ. ಎ ಕಾರ್ಯಕ್ರಮ ನಿರೂಪಿಸಿದರು.



























