ಪುತ್ತೂರು: ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಕೆಮ್ಮಾಯಿ ಇದರ ವತಿಯಿಂದ ಕೆಮ್ಮಾಯಿ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ದಿನಾರಣೆ ನಡೆಯಿತು.

ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಖತೀಬ್ ಉಸ್ತಾದರಾದ ಇರ್ಷಾದ್ ಸಖಾಫಿ ರವರು ಮಾತನಾಡಿದ, ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ ಮುಸ್ಲಿಂ ಸಹಿತ ಹಲವಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ.
ಶಹೀದ್ ಕುಂಞಾಲಿ ಮರಕ್ಕಾರ್ ನವವಿವಾಹಿತರಾಗಿದ್ದರೂ, ಪೋರ್ಚುಗೀಸರ ವಿರುದ್ದ ಹೋರಾಡಿ ಮದುವೆ ದಿನದಂದೇ ಪ್ರಾಣತ್ಯಾಗ ಮಾಡಿದವರಾಗಿದ್ದಾರೆ, ಆದರೆ ಅವರ ಚರಿತ್ರೆ ಇತಿಹಾಸದ ಪುಟಗಳಿಂದ ಮರೆಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ಮುಖ್ಯ ಪ್ರಭಾಷಣ ಮಾಡಿದ ಸದರ್ ಉಸ್ತಾದ್ ಮಜೀದ್ ಮುಸ್ಲಿಯಾರ್ ಮಾತನಾಡಿ, ದೇಶಕ್ಕಾಗಿ ಹಲವು ಮಂದಿ ಪ್ರಾಣಕೊಟ್ಟಿದ್ದಾರೆ. ಈ ದೇಶವನ್ನು ನಾವೆಲ್ಲರೂ ಒಟ್ಟಾಗಿ ಫ್ಯಾಸಿಸ್ಟರ ಕೈಯಿಂದ ಕಾಪಾಡಬೇಕಿದೆ ಎಂದರು.

ಜಮಾಅತ್ ಕಮಿಟಿ ಅಧ್ಯಕ್ಷರಾದ ಬಶೀರ್ ಹಾಜಿ ಎಕೆ ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯದ ಶುಭಾಶಯ ತಿಳಿಸಿದರು.
ಮುಹ್ಯಿಸ್ಸುನ್ನ ದರ್ಸ್ ವಿಧ್ಯಾರ್ಥಿಗಳಾದ ನೌಫಲ್, ತ್ವಲ್ಹತ್ , ರಿಶಾದ್ ಭಾಷಣ ಮಾಡಿದರು. ಖಿದ್ಮತುಲ್ ಇಸ್ಲಾಂ ಯಂಗ್ಮೆನ್ಸ್ ಎಸೋಸಿಯೇಷನ್ ಕಾರ್ಯದರ್ಶಿ ಅಝೀಝ್ ಕೆಮ್ಮಾಯಿ ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮ ನಿರೂಪಿಸಿದರು. ಮದ್ರಸ ಮಕ್ಕಳಿಂದ ಸುಂದರವಾದ ದೇಶಭಕ್ತಿ ಗೀತೆ ಹಾಡು ನಡೆಯಿತು.


























