ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ವಿದ್ಯಾರ್ಥಿಗಳಿಂದ ಆಗಸ್ಟ್ 13ರಂದು ಪುತ್ತೂರು ನಗರದಲ್ಲಿ
ಮೆರವಣಿಗೆ ನಡೆಯಿತು.
ಶಾಲಾ ಅಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು,ಪೋಷಕರು, ಶಾಲಾ ಎಸ್. ಡಿ .ಎಂ. ಸಿ ಸದಸ್ಯರು ಮೆರವಣಿಗೆಯಲ್ಲಿ ಸಾಗಿದರು. ಭಾರತಮಾತೆ, ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ ವಿದ್ಯಾರ್ಥಿಗಳು ಜಾಥಕ್ಕೆ ವಿಶೇಷ ಮೆರುಗು ನೀಡಿದರು. ವಿದ್ಯಾರ್ಥಿಗಳು ದೇಶಾಭಿಮಾನದಿಂದ ಘೋಷಣೆ ಕೂಗುತ್ತಾ ಪಡೀಲು, ಹಾರಾಡಿ ,ಬೊಳುವಾರು ವೃತ್ತದವರೆಗೆ ಸಾಗಿದರು. ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ 750 ಮಕ್ಕಳು ಏಕಕಾಲದಲ್ಲಿ ರಸ್ತೆ ಯುದ್ಧಕ್ಕೂ ಸಾಗಿದ ಮಕ್ಕಳ ಸೈನ್ಯ ಎಲ್ಲರ ಗಮನ ಸೆಳೆಯಿತು.

ವಿದ್ಯಾರ್ಥಿಗಳು ದೇಶಭಕ್ತಿಯೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯುತ್ತಾ ಜೈಕಾರದೊಂದಿಗೆ ಮುಂದೆ ಸಾಗಿದರು. ಭವ್ಯ ಮೆರವಣಿಗೆ ಬಳಿಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ನಗರಸಭಾ ಸದಸ್ಯ ಪ್ರೇಮಲತಾ ನಂದಿಲ, ಮುಖ್ಯ ಗುರುಗಳಾದ ಕೆ.ಕೆ ಮಾಸ್ತರ್,ಎಸ್. ಡಿ .ಎಂ .ಸಿ ಅಧ್ಯಕ್ಷರಾದ ಕೃಷ್ಣ ನಾಯ್ಕ ಮತ್ತು ಸದಸ್ಯರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲಾ ಸಂಸ್ಕೃತ ಶಿಕ್ಷಕರಾದ ಸುಬ್ರಹ್ಮಣ್ಯ ಹೊಳ್ಳ ಹಾಗೂ ಕೋಲಾಡಿ ಗ್ರೂಪ್ಸ್ ಮಾಲಕರಾದ ಉದಯಕುಮಾರ್ ಕೋಲಾಡಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.


























