ಕಾಪು : ಕುರ್ಕಾಲು ಗ್ರಾಮದ ಪ್ರವೀಣ್ ಕುರ್ಕಾಲು ರವರು ಹಲವಾರು ಬಾರಿ ರಕ್ತದಾನವನ್ನು ಮಾಡಿ ಹಲವು ಜನರ ಜೀವ ಉಳಿಸಿದ್ದು, ಹಲವಾರು ಶಿಬಿರಗಳನ್ನು ಆಯೋಜಿಸಿದ್ದರು. ಇದೀಗ ವೈಯಕ್ತಿಕವಾಗಿ 50ನೇ ಬಾರಿ ರಕ್ತದಾನವನ್ನು ಮಾಡುವ ಮೂಲಕ ಸಾಧನೆಗೈದಿದ್ದಾರೆ. ಇವರ ಈ ಸಾಧನೆಗೆ ಜೆಸಿಐ ಇಂಟರ್ ನ್ಯಾಷನಲ್ ವತಿಯಿಂದ ‘ಸಾಧಕ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕುರ್ಕಾಲು ಗ್ರಾಮದ ಶ್ರೀಧರ್ ಕೋಟ್ಯಾನ್ ಮತ್ತು ಗೀತಾ ದಂಪತಿಯ ಪುತ್ರರಾದ ಇವರು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಸುಮಾರು ಮೂರು ಸಾವಿರ ಸದಸ್ಯರನ್ನು ಒಳಗೊಂಡ ಪ್ರತಿಷ್ಠಿತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಕಾಪು ವಲಯದ ಅಧ್ಯಕ್ಷರಾಗಿದ್ದು, ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದು ಮಾತ್ರವಲ್ಲದೇ ವೈಯಕ್ತಿಕವಾಗಿ 50 ಬಾರಿ ರಕ್ತದಾನ ಮಾಡುವ ಮೂಲಕ ಸಾಧನೆಗೈದಿದ್ದಾರೆ.