ಉಪ್ಪಿನಂಗಡಿ: ನಿಲ್ಲಿಸಿದ್ದ ಹಿಟಾಚಿಯ ಮೂರು ಬ್ಯಾಟರಿ ಹಾಗೂ 400 ಲೀಟರ್ ಡೀಸೆಲ್, ಆಯಿಲ್ ಸೇರಿ ಹಲವು ವಸ್ತುಗಳು ಕಳ್ಳತನವಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಾಥ್ ಶೆಟ್ಟಿ ಎಂಬುವವರ ಒಂದು ಹಿಟಾಚಿಯು ಬೆಳ್ತಂಗಡಿ ತಾಲೂಕು, ಮೊಗ್ರು ಗ್ರಾಮದ, ಮೊಗೆರಡ್ಕ ದೇವಸ್ಥಾನದ ಬಳಿ ಎಪ್ರಿಲ್ ನಲ್ಲಿ ಕೆಲಸ ಮಾಡುತ್ತಿತ್ತು. ಮಳೆಗಾಲದಲ್ಲಿ ಕೆಲಸ ಕಡಿಮೆಯಾಗಿ ಹಿಟಾಚಿಯನ್ನು ಅಲ್ಲಿಯೇ ನಿಲ್ಲಿಸಿದ್ದರು. ಮಳೆ ವಿಪರೀತವಾಗಿ ಜೂನ್ ತಿಂಗಳಲ್ಲಿ ಹಿಟಾಚಿಗೆ ಕೆಲಸ ಇಲ್ಲದೆ ಅಲ್ಲೇ ನಿಲ್ಲಿಸಿದ್ದರು.
ಮಳೆ ಕಡಿಮೆಯಾದಾಗ ಶ್ರೀನಾಥ್ ಶೆಟ್ಟಿ ಬಂದು ನಿಲ್ಲಿಸಿದ ಹಿಟಾಚಿಯನ್ನು ನೋಡಿದಾಗ ಹಿಟಾಚಿಗೆ ಅಳವಡಿಸಿದ್ದ ಎರಡು ಬ್ಯಾಟರಿ ಹಾಗೂ ಹಿಟಾಚಿ ಒಳಗೆ ಇದ್ದ ಒಂದು ಬ್ಯಾಟರಿ ಸೇರಿ ಮೂರು ಬ್ಯಾಟರಿಗಳನ್ನು ಕಳವು ಮಾಡಿದ್ದು, ಜೊತೆಗೆ ಹಿಟಾಚಿಯಲ್ಲಿದ್ದ ಡೀಸೆಲ್ ಹಾಗೂ ಹಿಟಾಚಿಯ ಒಳಗಡೆ ಕ್ಯಾನಿನಲ್ಲಿ ತುಂಬಿಸಿ ಇರಿಸಿದ ಸುಮಾರು 400 ಲೀ ಡೀಸೆಲ್ ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಹಿಟಾಚಿಯ ಸ್ಪಾನರ್ ಸೆಟ್ ಗಳು ಮತ್ತು ಆಯಿಲ್ ಕೂಡ ಕಳ್ಳತನವಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 90/2022 ಕಲಂ: 379 ಭಾದಂಸಂ ರಂತೆ ಪ್ರಕರಣ ದಾಖಲಾಗಿದೆ.
ಕಳವಾದ ಬ್ಯಾಟರಿಯ ಅಂದಾಜು ಮೌಲ್ಯ ರೂ. 30,000/-ಆಗಬಹುದು. ಕಳವಾದ ಡೀಸಿಲ್ ನ ಅಂದಾಜು ಮೌಲ್ಯ ರೂ. ರೂ.31,000/- ಆಗಬಹುದು. ಅಲ್ಲದೇ ಹಿಟಾಚಿಯ ಸ್ಪಾನರ್ ಸೆಟ್ ಗಳು ಮತ್ತು ಆಯಿಲ್ ಕೂಡ ಕಳ್ಳತನವಾಗಿದ್ದು ಇದರ ಅಂದಾಜು ಮೌಲ್ಯ ರೂ 1,500/-ಆಗಬಹುದು. ಬ್ಯಾಟರಿ, ಡೀಸಿಲ್, ಮತ್ತು ಸ್ಪಾನರ್ ಸೆಟ್ಟ್ ಹಾಗೂ ಆಯಿಲ್ ನ ಒಟ್ಟು ಅಂದಾಜು 62,500/- ಆಗಬಹುದಾಗಿದೆ.