ಈಶ್ವರಮಂಗಲ: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಇದರ ವತಿಯಿಂದ ‘ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 7ನೇ ವರ್ಷದ ‘ಈಶ್ವರಮಂಗಲ ಮೊಸರು ಕುಡಿಕೆ ಉತ್ಸವ 2022’ ಆ.19 ರಂದು ಅಪರಾಹ್ನ 2.30 ರಿಂದ ನಡೆಯಲಿದೆ.
ಶೋಭಾಯಾತ್ರೆಯ ಉದ್ಘಾಟನೆಯನ್ನು ಹನುಮಗಿರಿ ಕ್ಷೇತ್ರದ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ ರವರು ನೆರವೇರಿಸಲಿದ್ದಾರೆ.
ಈಶ್ವರಮಂಗಲ ಪೇಟೆಯಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಬೃಹತ್ ಮೆರವಣಿಗೆಯೊಂದಿಗೆ ಅಟ್ಟಿಮಡಿಕೆ ಹೊಡೆಯುವುದರೊಂದಿಗೆ ಕಬಾತ್ ಹೊಡೆಯುವ ಸ್ಪರ್ಧೆಯು ನಡೆಯಲಿದೆ. ಸಂಜೆ 7 ಗಂಟೆಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.
