ಹುಬ್ಬಳ್ಳಿ: ಮಂಜು ಕವಿದ ವಾತಾವರಣವಿದ್ದ ಕಾರಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶನಿವಾರ ಆಗಮಿಸಿದ ಇಂಡಿಗೋ ವಿಮಾನ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ಪ್ರಯಾಣ ಬೆಳೆಸಿದೆ ಎನ್ನಲಾಗಿದೆ. ಬೆಳಗ್ಗೆ 7:20 ಗಂಟೆಗೆ ಆಗಮಿಸಿದ್ದ ವಿಮಾನ ಮಂಜು ಆವರಿಸಿದ್ದರಿಂದ ಲ್ಯಾಂಡಿಂಗ್ ಆಗಲು ಆಗದೆ ಆಕಾಶದಲ್ಲಿ ಸುಮಾರು 20 ನಿಮಿಷ ಸುತ್ತಾಡಿದ್ದು, ಎಟಿಎಸ್‌ನಿಂದ ಸಿಗ್ನಲ್ ಸಿಗದ ಕಾರಣ ಕೊನೆಗೆ ಮಾರ್ಗ ಬದಲಿಸಿಕೊಂಡು ಮಂಗಳೂರಿಗೆ ತೆರಳಿದ್ದು, ವಿಮಾನದಲ್ಲಿ ಸುಮಾರು 65 ಪ್ರಯಾಣಿಕರು ಇದ್ದು, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅಂದಾಜು 62 ಪ್ರಯಾಣಿಕರು ತೆರಳುವವರಿದ್ದರು ಎಂದು ವರದಿಯಾಗಿದೆ. ಇನ್ನು ಇದೇ ಸಮಯದಲ್ಲಿ ಚೆನ್ನೈನಿಂದ ಹುಬ್ಬಳ್ಳಿಗೆ ಬೆಳಗ್ಗೆ 8:00 ಗಂಟೆಗೆ ಆಗಮಿಸಿದ್ದ ಇಂಡಿಗೋ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿ, ಮರಳಿ ಕೊಚ್ಚಿಗೆ ಪ್ರಯಾಣ ಬೆಳೆಸಿತು ಎಂದು ತಿಳಿದು ಬಂದಿದೆ.