ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದೇವಳದ ಪೂಜೆ ಮತ್ತು ಪ್ರಸಾದ ವಿತರಣೆಗಾಗಿ ಅರಣ್ಯ ಇಲಾಖೆಯಿಂದ 20 ಕೆ.ಜಿ ಶ್ರೀಗಂಧವನ್ನು ಮಂಜೂರು ಮಾಡಿ ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದಾರೆ.
ಶ್ರೀ ದೇವಳದಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ವರ್ಷಾವಧಿ ಜಾತ್ರೆ ಮತ್ತು ಉತ್ಸವಗಳ ಸಮಯದಲ್ಲಿ ಹತ್ತು ಸಾವಿರಕ್ಕೂ ಮೇಲ್ಪಟ್ಟು ಜನ ಸೇರುವುದರಿಂದ 20 ಕೆ.ಜಿ ಶ್ರೀಗಂಧವನ್ನು ಬಿಡುಗಡೆಗೊಳಿಸುವಂತೆ ದೇವಳದಿಂದ ಮನವಿ ಮಾಡಲಾಗಿತ್ತು.
ಈ ಕುರಿತು ಸದ್ರಿ ದೇವಸ್ಥಾನವು ಕ್ಲಾಸ್ ಎ ದೇವಸ್ಥಾನವಾಗಿದ್ದು, ಸರಕಾರಿ ಆದೇಶ ಸಂಖ್ಯೆ 192 ಎಫ್‌ಡಿಸಿ 2016 ಬೆಂಗಳೂರು, 2017ರ ಡಿ.4 ರಂತೆ ದೇವಳಕ್ಕೆ ಶ್ರೀ ಗಂಧವನ್ನು ವಾರ್ಷಿಕವಾಗಿ ಗರಿಷ್ಠ 20 ಕೆ.ಜಿ ಶ್ರೀಗಂಧವನ್ನು ಸರಬರಾಜು ಮಾಡಲು ಅವಕಾಶವಿರುವುದಿರಂದ 20 ಕಿಲೋ ಬಾಗರ್‌ದಾದ್ ಮತ್ತು ಐನ್ ಬಾಗಾರ್ ದಾದ್ ಮಾದರಿಯ (ಘಟಿಬುದ್ಧ ಮತ್ತು ಮೊದಲನೇ ದರ್ಜೆ ಜಾಜ್‌ಲಫಕಲ್ ಬಿಟ್ಟು) ಶ್ರೀಗಂಧವನ್ನು ಮಂಜೂರು ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗದವರು ಶಿಫಾರಸ್ಸು ಮಾಡಿದ್ದರು. ಅದರಂತೆ 20 ಕಿಲೋ ಶ್ರೀಗಂಧವನ್ನು ಹಂಚಿಕೆ ಮಾಡಲು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜೂರು ಮಾಡಿದ್ದಾರೆ.




























