ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿಗೆ(ದಿಶಾ) ನಾಮನಿರ್ದೇಶಿತ ಸದಸ್ಯರಾಗಿ ರಾಮದಾಸ್ ಹಾರಾಡಿ ರವರು ಆಯ್ಕೆಯಾಗಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಗೆ(ದಿಶಾ) ರಾಮದಾಸ್ ಹಾರಾಡಿ ರವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯು ತ್ರೈಮಾಸಿಕ ಅವಧಿಗೊಮ್ಮೆ ನಡೆಯಲಿದ್ದು, ಸದ್ರಿ ಸಭೆಗೆ ರಾಮದಾಸ್ ರವರ ಉಪಸ್ಥಿತಿ ಅವಶ್ಯವಾಗಿದೆ.
ದಕ್ಷಿಣ ಕನ್ನಡ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ರವರು ಆದೇಶ ಹೊರಡಿಸಿದ್ದಾರೆ.


























