ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೆ ಹತ್ತಿದ ಘಟನೆ ಪುತ್ತೂರಿನ ಮುಖ್ಯ ರಸ್ತೆಯ ಎಳ್ಮುಡಿ ಯಲ್ಲಿ ನಡೆದಿದೆ.
ಶಶಿಧರ್ ಕಿನ್ನಿಮಜಲು ಚಲಾಯಿಸುತ್ತಿದ್ದ ಕಾರು ಎಳ್ಮುಡಿ ಬಳಿ ಅವರ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ನಿಂತಿದೆ.

ಘಟನೆಯಿಂದ ಚಾಲಕನಿಗೆ ಯಾವುದೇ ಹಾನಿಯಾಗಿಲ್ಲ ಮತ್ತು ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

























