ನವದೆಹಲಿ: ನಿಯಮಗಳ ಉಲ್ಲಂಘನೆ, ಮಾಹಿತಿಗಳನ್ನು ತಿರುಚಿದ್ದು ಮತ್ತು ಆಕ್ಷೇಪಾರ್ಹ ಆಫ್ಲೈನ್ ನಡವಳಿಕೆ ಪ್ರದರ್ಶಿಸಿದ ಕಾರಣಕ್ಕಾಗಿ ಪ್ರಸ್ತುತ ವರ್ಷದ ಜನವರಿಯಿಂದ ಈಚೆಗೆ 2 ಸಾವಿರಕ್ಕೂ ಅಧಿಕ ಆನ್‌ಲೈನ್ ಸಾಲ ಆ್ಯಪ್‌ಗಳನ್ನು ಇಂಡಿಯಾ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ತಿಳಿಸಿದೆ.
ಈ ವಿಚಾರದಲ್ಲಿ ಸದ್ಯವೇ ಇನ್ನಷ್ಟು ಕಠಿನ ನಿಗಾ, ಪರಿಶೀಲನೆಯನ್ನು ಜಾರಿಗೆ ತರುವುದಾಗಿ ಅದು ತಿಳಿಸಿದೆ.
ತಾನು ಕಾರ್ಯಾಚರಿಸುತ್ತಿರುವ ದೇಶಗಳ ವ್ಯಾಪ್ತಿಯ ಕಾನೂನು, ನಿಯಮಗಳ ಪಾಲನೆಗೆ ಗೂಗಲ್ ಸದಾ ಕಟಿಬದ್ಧವಾಗಿದೆ. ಆನ್‌ಲೈನ್ ಹಾನಿ, ಮೋಸ ಒಂದು ಜಾಗತಿಕ ಪಿಡುಗು ಎಂಬುದಾಗಿ ಗೂಗಲ್ ಏಶ್ಯಾ- ಪೆಸಿಫಿಕ್ ವಲಯದ ನಿರ್ದೇಶಕ ಮತ್ತು ಮುಖ್ಯಸ್ಥ ಸೈಕತ್ ಮಿತ್ರಾ ಹೇಳಿದ್ದಾರೆ.


























