ನವದೆಹಲಿ: 16 ವರ್ಷದ ಬಾಲಕಿ ಮೇಲೆ ಗನ್ನಿಂದ ಶೂಟ್ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಯೊಬ್ಬ ಅಪ್ರಾಪ್ತೆಯ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿದ್ದ. ಆಕೆ ಆತನ ಮೆಸೇಜ್ಗಳಿಗೆ ರಿಪ್ಲೈ ಮಾಡದಿರೋದಕ್ಕೆ ಶೂಟ್ ಮಾಡಿದ್ದಾರೆ ಎಂದಿದ್ದಾರೆ.
ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರ್ಮಾನ್ ಅಲಿ, ಬೊಬ್ಬಿ ಮತ್ತು ಪವನ್ ಬಂಧಿತ ಆರೋಪಿಗಳು.
ಆರ್ಮಾನ್ ಅಲಿ ಯುವತಿ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿದ್ದ. ಏಕಾಏಕಿ ಚಾಟಿಂಗ್ ನಿಲ್ಲಿಸಿರೋದಕ್ಕೆ ಕೋಪಿಸಿಕೊಂಡಿದ್ದ ಆರ್ಮಾನ್ ಅಲಿ, ಹತ್ಯೆಗೆ ಸ್ಕೆಚ್ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ ಕಳೆದ ಎರಡು ವರ್ಷಗಳಿಂದ ಪರಸ್ಪರ ಟಚ್ನಲ್ಲಿ ಇದ್ದರಂತೆ. ಕಳೆದ 6 ತಿಂಗಳಿನಿಂದ ಇಬ್ಬರ ಮಧ್ಯೆ ಯಾವುದೇ ಮಾತುಕತೆ ಇರಲಿಲ್ಲ. ನಿನ್ನೆ ಸಂಜೆ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಕೃತ್ಯ ನಡೆದಿದೆ. ಸಂತ್ರಸ್ತೆಯ ಭುಜಕ್ಕೆ ಗುಂಡು ಹಾರಿಸಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.


























