ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಪುತ್ತೂರು ವಲಯದ ವತಿಯಿಂದ ನಡೆಯುತ್ತಿರುವ ‘ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆ-2022’ ‘ಪುತ್ತೂರ್ದ ಮುತ್ತು ಶ್ರೀ ಕೃಷ್ಣಾ’ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಆ.31 ಕೊನೆಯ ದಿನವಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 3000 ಸಾವಿರ ರೂ. ನಗದು ಮತ್ತು ಫೋಟೋಫ್ರೇಮ್ ಹಾಗೂ ಪ್ರಶಸ್ತಿಪತ್ರ ಸಿಗಲಿದೆ., ದ್ವಿತೀಯ ಬಹುಮಾನವಾಗಿ 2000 ಸಾವಿರ ರೂ., ನಗದು ಮತ್ತು ಫೋಟೋಫ್ರೇಮ್ ಹಾಗೂ ಪ್ರಶಸ್ತಿಪತ್ರ ಸಿಗಲಿದೆ., ತೃತೀಯ ಬಹುಮಾನವಾಗಿ 1000 ಸಾವಿರ ರೂ. ನಗದು ಹಾಗೂ ಫೋಟೋಫ್ರೇಮ್ ಹಾಗೂ ಪ್ರಶಸ್ತಿಪತ್ರ ಸಿಗಲಿದೆ.
ಹಾಗೆಯೇ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಇನ್ಸ್ಟಾ ಬಾಸ್ಕೆಟ್ ನ ಕೂಪನ್ ನೀಡಲಾಗುವುದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆ.31 ಕೊನೆಯ ದಿನವಾಗಿದ್ದು, ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ನಾಗೇಶ್ ಟಿ.ಎಸ್. ಕೆಮ್ಮಾಯಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೋಟೋ ಕಳುಹಿಸಬೇಕಾದ ವಿಳಾಸ skpaputtur2021@gmail.com, ಹೆಚ್ಚಿನ ಮಾಹಿತಿಗಾಗಿ 9535618382 ಅನ್ನು ಸಂಪರ್ಕಿಸ ಬಹುದಾಗಿದೆ.


























