ಮಂಗಳೂರು ಮೂಲದ ದಿವಿತಾ ರೈ, ಲಿವಾ ಮಿಸ್ ದಿವಾ ಯೂನಿವರ್ಸ್ 2022ರ ಸೌಂದರ್ಯ ಸ್ಪರ್ಧೆ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022ರ ಪ್ರಶಸ್ತಿ ಕಿರೀಟವನ್ನು ತೊಡಿಸಿದ್ದಾರೆ.

ಕರ್ನಾಟಕದ ದಿವಿತಾ ರೈ ಅವರು ಮಿಸ್ ದಿವಾ 2022 ಆಗಿ ಹೊರಹೊಮ್ಮಿದ್ದಾರೆ. ಇವರು 2022ರ ಮಿಸ್ ಯೂನಿವರ್ಸ್ 2022ಕ್ಕೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ದಿವಿತಾ ರೈ ಹಿನ್ನೆಲೆ:
ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ. ದಿಲೀಪ್ ರೈ ಹಾಗೂ ಪವಿತ್ರಾ ರೈ ರವರ ಪುತ್ರಿ. ತಂದೆಯ ಉದ್ಯೋಗದ ಕಾರಣದಿಂದಾಗಿ ದಿವಿತಾ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಬೇಕಾಗಿತ್ತು., ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಅವರು ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ, ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ.
ಹರ್ನಾಝ್ ಸಂಧು ಅವರು ಕರ್ನಾಟಕದ ಸುಂದರಿ ದಿವಿತಾ ರೈಗೆ ಮಿಸ್ ದಿವಾ ಯೂನಿವರ್ಸ್ ಕಿರೀಟ ತೊಡಿಸುವುದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ದಿವಿತಾ ರೈಗೆ ತನ್ನ ಕಿರೀಟ ತೊಡಿಸಿದ ಬಳಿಕ ಹರ್ನಾಜ್ ಸಂಧು ಅವರು ಸೌಂದರ್ಯ ಪಟ್ಟ ಗೆದ್ದ ದಿವಿತಾ ಜತೆ ಒಂದು ವಾಕ್ ಮಾಡಿದರು. ಹರ್ನಾಜ್ ಮತ್ತು ದಿವಿತಾ ಇಬ್ಬರೂ ತಮ್ಮ ಅದ್ಭುತ ಸೌಂದರ್ಯದಿಂದ ಕಂಗೊಳಿಸುತ್ತಿದ್ದರು.

























