ಪುತ್ತೂರು: ಈಶ್ವರಮಂಗಲ ಶ್ರೀ ಗಜಾನನ ವಿದ್ಯಾಸಂಸ್ಥೆಯ ನಿರ್ದೇಶಕರಾದ ನಿತಿನ್ ಪ್ರಸಾದ್ ಹೆಗ್ಡೆ ಮೇನಾಳ ರವರು ಅಲ್ಪ ಕಾಲದ ಅಸೌಖ್ಯದಿಂದ ಆ.31ರಂದು ಮುಂಜಾನೆ ನಿಧನರಾದರು.

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ನಿತಿನ್ ರವರು ಶ್ರೀ ಗಜಾನನ ವಿದ್ಯಾಸಂಸ್ಥೆಯ ಹಾಲಿ ನಿರ್ದೇಶಕರಾಗಿದ್ದರು.
ಮೃತರು ಕುಟುಂಬಸ್ಥರು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.

























