ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿ ಶಕ್ತಿ ಸಂಸ್ಥೆ ಕೊಡಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮೋನಿಶ್ ವಿಟ್ಲ ಪುರಸ್ಕೃತರಾಗಿದ್ದಾರೆ.
ವಿಟ್ಲದ ಇರಂದೂರಿನ ಲೋಕೇಶ್ ಎ.ಕೆ. ಹಾಗೂ ಲತಾ ರವರ ಪುತ್ರರಾಗಿರುವ ಮೋನಿಶ್ ವಿಟ್ಲ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

ಮೋನಿಶ್ ಈಗಾಗಲೇ 300ಕ್ಕೂ ಅಧಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ಮಾಡಿದ್ದು, ಶಿವಂ ಡಾನ್ಸ್ ಅಕಾಡೆಮಿಯಲ್ಲಿ ನೃತ್ಯ ತರಗತಿ, ಆರ್. ಕೆ. ಕಲಾ ಸಂಸ್ಥೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಬ್ಬಣ್ಣ ಕೋಡಿ ರಾಮ್ ಭಟ್ ರವರಲ್ಲಿ ಯಕ್ಷಗಾನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ರವರ ಬಳಿ ಕುಣಿತ ಭಜನೆ, ತತ್ವ ಆರ್ಟ್ಸ್ ಸಂಸ್ಥೆಯ ಟೀಲಾಕ್ಷ ರವರ ಬಳಿ ಚಿತ್ರಕಲೆ ಮತ್ತು ಕ್ಲೇ ಮಾಡ್ಲಿಂಗ್ ಡ್ರಾಯಿಂಗ್ಅಭ್ಯಾಸ ಮಾಡುತ್ತಿದ್ದಾರೆ. ವಿದೂಷಿ ಸವಿತಾ ಕೊಡಂದೂರು ರವರ ಬಳಿ ಸಂಗೀತ ತರಗತಿ ಅಭ್ಯಾಸ ಮಾಡುತ್ತಿದ್ದಾರೆ., ಈ ಎಲ್ಲಾ ರಂಗದಲ್ಲೂ ಸೈ ಎನಿಸಿಕೊಂಡಿರುವ ಬಹುಮುಖ ಪ್ರತಿಭೆ. ಸ್ಥಳೀಯ ಚಾನೆಲ್ ಗಳು ನಡೆಸಿದ ಡಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಯತ್ನದಿಂದ ಸಾಧಿಸಬಹುದಾದ, ಕರಗತ ಮಾಡಿಕೊಳ್ಳಬಹುದಾದ ಅದ್ಭುತವಾದ ಸಾಂಸ್ಕೃತಿಕ ಕ್ಷೇತ್ರ ಜೇಸಿ ಶಾಲಾ ವಿದ್ಯಾರ್ಥಿ ಮೋನಿಷ್ ಗೆ ಒಲಿದಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿ ಶಕ್ತಿ ಸಂಸ್ಥೆ ಕೊಡಮಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಯಾದ ಮೋನಿಷ್ ವಿಟ್ಲರಿಗೆ ಬಂದಿರುವುದು ಸಂಸ್ಥೆಗೂ ಗರಿಮೆ ತಂದ ವಿಷಯವಾಗಿದೆ. ಇವರನ್ನು ವಿಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ,ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಶಿಕ್ಷಕೇತರ ವರ್ಗ ಅಭಿನಂದಿಸಿದೆ.ಇನ್ನಷ್ಟು ಅವಕಾಶಗಳು ದೊರಕಲಿ ಎಂದು ಹಾರೈಸಿದೆ.

























