ಬಂಟ್ವಾಳ: ಆಟವಾಡುತ್ತಿದ್ದ 12 ವರ್ಷದ ಬಾಲಕನೋರ್ವ ಕಣಜದ ಹುಳು ಕಡಿದು ಮೃತಪಟ್ಟ ಘಟನೆ ಬಿಸಿರೋಡ್ ಸಮೀಪದ ಕಲಾಯಿ ಎಂಬಲ್ಲಿ ನಡೆದಿದೆ.
ಕಲಾಯಿ ನಿವಾಸಿ ಹಕಿಮ್ ಎಂಬವರ ಮಗ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಬಾಲಕನ ಮೇಲೆ ಕಣಜದ ಹುಳು ದಾಳಿ ಮಾಡಿದ್ದು, ಗಂಭೀರ ಗಾಯಗಳಾಗಿತ್ತು.
ಬಾಲಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ
ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಆದರೇ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.