ಉಪ್ಪಿನಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಕಳವುಗೈದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗೋಳಿತೊಟ್ಟು ಅರಂತಬೈಲು ನಿವಾಸಿ ರಮ್ಲ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.1 ರಂದು ರಮ್ಲ ಮತ್ತು ಅವರ ಪತ್ನಿ ಮಗನನ್ನು ಕರೆದುಕೊಂಡು ಬರಲು ಏರ್ ಪೋರ್ಟ್ ಗೆ ಹೋಗಿದ್ದು, ಮಂಗಳೂರಿನಿಂದ ಸೆ.2 ರಂದು ಮನೆಗೆ ಬಂದಾಗ ಮನೆಯ ಬೀಗವನ್ನು ಹೊಡೆದು ಬಾಗಿಲು ತೆರೆದಿರುವುದು ಕಂಡು ಬಂದಿರುತ್ತದೆ. ಮನೆಯ ಒಳಗೆ ಹೋಗಿ ಕಪಾಟಿನ ಒಳಗೆ ನೋಡಿದಾಗ, ಪರ್ಸ್ ನಲ್ಲಿ ಇರಿಸಿದ್ದ 64 ಗ್ರಾಂ ತೂಕದ ಪೆಂಡೆಂಟ್ ಇರುವ ಚಿನ್ನದ ಸರ-1, 40 ಗ್ರಾಂ ತೂಕದ ಚಿನ್ನದ ಬಳೆ- 1, ½ ಗ್ರಾಂ ತೂಕದ ಚಿನ್ನದ ಉಂಗುರ-2, ಒಟ್ಟು ಸುಮಾರು 105 ಗ್ರಾಂ ಮತ್ತು ಕಪಾಟಿನಲ್ಲಿದ್ದ ನಗದು ಹಣ ರೂ 8000/- ಚಿನ್ನಾಭರಣಗಳು ಹಾಗೂ ನಗದು ಹಣ ಕಳವು ಆಗಿದ್ದು, ಇದರ ಒಟ್ಟು ಅಂದಾಜು ಮೌಲ್ಯ ರೂ. 5,33,000/- ಆಗಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 94/2022 ಕಲಂ:457 380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.