ಪುತ್ತೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ರವರ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಧಿಕಾರಿಗಳು ಸೆ.6 ರಂದು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದ 32 ಕಡೆಗಳಿಗೆ ದಾಳಿ ನಡೆಸಿದ್ದಾರೆ.
ನೂರಕ್ಕೂ ಅಧಿಕ ವಾಹನಗಳಲ್ಲಿ ತನಿಖಾ ದಳದ ಅಧಿಕಾರಿಗಳು ಗುಪ್ತವಾಗಿ ಆಗಮಿಸಿದ್ದು, ವಿವಿದೆಡೆ ಶಂಕಿತರಿಗೆ ಬಲೆ ಬೀಸಿದ್ದಾರೆ. ಜಾಬೀರ್ ಅರಿಯಡ್ಕ, ಮಸೂದ್ ಅಜ್ಞಾಡಿ, ಸಾದಿಕ್ ಸಾಲ್ಮರ, ಇಕ್ಬಾಲ್ ಬೆಳ್ಳಾರೆ ಹಾಗೂ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಎನ್.ಐ.ಎ. ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಕೊಲೆಗೆ ಸಹಕರಿಸಿದವರನ್ನು ಪುತ್ತೂರಿನ ದರ್ಬೆ ನಿರೀಕ್ಷಣಾ ಮಂದಿರಕ್ಕೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.