ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಎರಡು ಪ್ರಕರಣಗಳಲ್ಲಿ ಒಟ್ಟು 55.39 ಲಕ್ಷ ರೂ ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
![](https://zoomintv.online/wp-content/uploads/2022/09/WhatsApp-Image-2022-09-07-at-10.25.32-AM.jpeg)
ಸೋಮವಾರ ದುಬೈನಿಂದ ಬಂದಿದ್ದ ಮೂವರು ಚಪ್ಪಲಿ ಮತ್ತು ಬನಿಯಾನ್ ನಲ್ಲಿ ಪೇಸ್ಟ್ ರೂಪದಲ್ಲಿ 24ಕ್ಯಾರೆಟ್ ಪರಿಶುದ್ದತೆಯ 897 ಗ್ರಾಂ ತೂಕದ 45,65,730 ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದರು.
ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ 9.74 ಲ.ರೂ ಮೌಲ್ಯದ 190.250 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.