ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ತುಳಿದು ರಸ್ತೆಗೆ ದೂಡಿ ಹಾಕಿದ ಕೃತ್ಯವೊಂದು ಈಶ್ವರಮಂಗಲದಲ್ಲಿ ನಡೆದಿದ್ದು, ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದು, ಆದರೇ ಈ ಘಟನೆಯ ಅಸಲಿ ವಿಚಾರವೇ ಬೇರೆ ಇದೆ.
ವೀಡಿಯೊದಲ್ಲಿ ಬಸ್ ಗೆ ಹತ್ತಲು ಬಂದ ವ್ಯಕ್ತಿಯು ಕಂಠ ಪೂರ್ತಿ ಕುಡಿದಿದ್ದು, ಆತನಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬಸ್ ನಿರ್ವಾಹಕ ಆತನನ್ನು ಬಸ್ ನಿಂದ ಹೊರ ದಬ್ಬಿದ್ದಾನೆ ಎನ್ನಲಾಗುತ್ತಿದೆ.
ಬಸ್ ಹತ್ತಲು ಬಂದ ವ್ಯಕ್ತಿಯ ಬಗ್ಗೆ ಸ್ಥಳೀಯರ ಮಾಹಿತಿ ಪ್ರಕಾರ, ಈತ ದಿನವಿಡೀ ಕುಡಿದು ಅಲ್ಲಿ ಇಲ್ಲಿ ರಾದ್ದಾಂತ ಸೃಷ್ಟಿಸುತ್ತಾನೆ ಎಂದು ತಿಳಿದು ಬಂದಿದೆ. ಆತನಿಗೆ ದಿನವಿಡೀ ಕುಡಿದು ಬೇರೆಯವರಿಗೆ ತೊಂದರೆ ನೀಡುವುದೆ ಕೆಲಸವೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಈತನ ಕುಡಿದು ರಂಪಾಟ ನಡೆಸಿದ ಹಲವು ವೀಡಿಯೊಗಳು ಇದೀಗ ವೈರಲ್ ಆಗುತ್ತಿದೆ.
ಪಾನಮತ್ತ ವ್ಯಕ್ತಿಯಿಂದ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಬಾರದೆಂಬ ಕಾಳಜಿಯಿಂದ ಬಸ್ ನಿರ್ವಾಹಕ ಆತನನ್ನು ಹೊರ ಹೋಗಲು ಹೇಳಿದ್ದು, ಆದರೇ ಎಷ್ಟು ಹೇಳಿದರು ಆತ ಬಸ್ಸಿನಿಂದ ಹೊರ ಹೋಗದೇ ರಂಪಾಟ ಮಾಡಿದ್ದು, ಬಸ್ ನಿರ್ವಾಹಕನ ಮೇಲೆಯೇ ಹಲ್ಲೆಗೆ ಯತ್ನಿಸಿದ್ದು, ಈ ಹಿನ್ನೆಲೆ ನಿರ್ವಾಹಕ ದಬ್ಬಿದ್ದಾರೆ ಎನ್ನಲಾಗುತ್ತಿದ್ದು, ಪ್ರಯಾಣಿಕರ ಬಗ್ಗೆ ಕಾಳಜಿ ವಹಿಸಿದ ಬಸ್ ನಿರ್ವಾಹಕರಿಗೆ ಬಸ್ ನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.