ಪುತ್ತೂರಿನ ಮೀನು ಮಾರುಕಟ್ಟೆಗೆ ಇಂದು (ಸೆ.9) ಸುಮಾರು 65 ಕೆಜಿ ತೂಕದ ದೊಡ್ಡ ಮೀನೊಂದು ಬಂದಿದ್ದು, ಪುತ್ತೂರು ಮತ್ತು ದರ್ಬೆ ಮೀನಿನ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ದೊಡ್ಡ ಗಾತ್ರದ ಮೀನಿನ ಹೆಸರು ಮಡಲು ಮೀನು ಎಂದಾಗಿದ್ದು, ಪುತ್ತೂರಿನ ಮೀನು ಮಾರುಕಟ್ಟೆಯಲ್ಲಿ ನವಾಜ್ ಕೂರ್ನಡ್ಕ ರವರ ಮಾಲಕತ್ವದ ಸ್ಟಾಲ್ ನಂ.2 yesnaz fisheries ಹಾಗೂ ದರ್ಬೆ ಮಂಗಳ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗದ ಮೀನಿನ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ಮೀನು ಕೆಜಿ ಗೆ 300 ರೂ. ಯಂತೆ ಗ್ರಾಹಕರಿಗೆ ಲಭ್ಯವಿದೆ ಎಂದು ಅಂಗಡಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.