ಬೆಂಗಳೂರು: ರಾಜ್ಯದಲ್ಲಿ ಎಸಿಬಿ ರದ್ದು ಮಾಡಿ ತೀರ್ಪು ನೀಡಿದ್ದ ಹೈಕೋರ್ಟಿನ ಆದೇಶದಂತೆ ಎಸಿಬಿ ರದ್ದನ್ನು ಅನುಷ್ಠಾನ ಮಾಡಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ.
ಈ ಕುರಿತು ಅನುಷ್ಠಾನ ಆದೇಶ ನೀಡಿದ ಸರ್ಕಾರ ಲೋಕಾಯುಕ್ತಕ್ಕೆ ಎಸಿಬಿಯ ಎಲ್ಲ ಪ್ರಕರಣಗಳೂ ವರ್ಗಾಯಿಸಿ ಆದೇಶ ಹೊರಡಿಸಿದ್ದು, ಎಸಿಬಿಗೆ ನೀಡಿದ್ದ ತನಿಖಾಧಿಕಾರವನ್ನು ಸರ್ಕಾರ ವಾಪಸ್ ಪಡೆದಿದೆ.
ಆಗಸ್ಟ್ 11 ರಂದು ಎಸಿಬಿ ರದ್ದು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಹೈಕೋರ್ಟಿನ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಈ ಮೂಲಕ ಇದೀಗ ಎಸಿಬಿ ಇತಿಹಾಸ ಪುಟ ಸೇರಿದೆ.
ರಾಜ್ಯದಲ್ಲಿ ಆರು ವರ್ಷಕ್ಕೂ ಹೆಚ್ಚು ಕಾಲದಿಂದ ಎಸಿಬಿ ಕಾರ್ಯಚರಣೆ ಮಾಡುತ್ತಿತ್ತು. 2016ರ ಮಾರ್ಚ್ 19 ರಂದು ಎಸಿಬಿಯನ್ನು ಸಿದ್ದರಾಮಯ್ಯ ಸರ್ಕಾರ ರಚಿಸಿತ್ತು.