ವಿಟ್ಲ: ಅನಾರೋಗ್ಯದಿಂದಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ವಿಟ್ಲದಲ್ಲಿ ನಡೆದಿದೆ.
ವಿಟ್ಲದ ಸಾಧನಾ ಬುಕ್ ಸ್ಟಾಲ್ ಮಾಲಕ, ಬೊಬ್ಬೆಕೇರಿ ನಿವಾಸಿ ಹಿಲಾರಿ ಮಸ್ಕರೇನಸ್ ರವರ ಪುತ್ರ ನಿರೂಪ್ ಮಸ್ಕರೇನಸ್(38) ಮೃತ ಯುವಕ.
ನಿರೂಪ್ ರವರು ಕೆಲ ಸಮಯದಿಂದ ಅನಾರೋಗ್ಯದಿಂದಿದ್ದು, ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.