ಬಂಟ್ವಾಳ: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ ರಿ. ವತಿಯಿಂದ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ವತಿಯಿಂದ ಜರಗುವ 42ನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ‘ದಸರಾ ಕ್ರೀಡಾಕೂಟ’ ಸೆ.25 ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಸೆ.25 ರಂದು ಬೆಳ್ಳಿಗೆ 9 ಗಂಟೆಯಿಂದ ಮಕ್ಕಳ ಹಾಗೂ ಜೂನಿಯರ್ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರಾದ ಸಚಿನ್ ರೈ ಮಾಣಿಗುತ್ತು ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಹಿರಿಯರ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ. 2 ಗಂಟೆಯಿಂದ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 4 ಗಂಟೆಗೆ ಹಗ್ಗಜಗ್ಗಾಟ ನಡೆಯಲಿದೆ.
ಸಂಜೆ 5 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ವಹಿಸಲಿದ್ದಾರೆ. ಅತಿಥಿಗಳಾಗಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಂಯೋಜಕರಾದ ಜಗದೀಶ್ ನೆತ್ತರಕೆರೆ, ಆರ್. ಆರ್. ಅಲ್ಯುಮೀನಿಯಂ & ಇಂಟಿರೀಯರ್ಸ್ ನ ಮಾಲಕರಾದ ಪ್ರಶಾಂತ್ ಶೆಟ್ಟಿ, ಸೂರಿಕುಮೇರು ರವರು ಆಗಮಿಸಲಿದ್ದಾರೆ.
ಹಿರಿಯರ ಕಬಡ್ಡಿ ಪಂದ್ಯಾಟದ ಬಹುಮಾನಗಳು : ಪ್ರಥಮ – 4001, ದ್ವಿತೀಯ – 3001.
ಹಗ್ಗಜಗ್ಗಾಟ ಬಹುಮಾನಗಳು : ಪ್ರಥಮ – 2501, ದ್ವಿತೀಯ – 2001
9ನೇ ತರಗತಿಯಿಂದ ಪದವಿವರೆಗೆ ಕಬಡ್ಡಿ ಪಂದ್ಯಾಟ ಬಹುಮಾನಗಳು : ಪ್ರಥಮ -1501, ದ್ವಿತೀಯ -1001.
1ನೇ ತರಗತಿ ಯಿಂದ 8ನೇ ತರಗತಿವರೆಗೆ ಕಬಡ್ಡಿ ಪಂದ್ಯಾಟ : ಪ್ರಥಮ -701, ದ್ವಿತೀಯ – 301.
ಉತ್ತಮ ರೈಡರ್, ಉತ್ತಮ ಕ್ಯಾಚರ್ ಮತ್ತು ಸವ್ಯಸಾಚಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಜೂನಿಯರ್ ಕಬಡ್ಡಿ ಪಂದ್ಯಾಟ, ಹಿರಿಯರ ಕಬಡ್ಡಿ ಪಂದ್ಯಾಟ ಹಾಗೂ ಮಹಿಳೆಯರ ಎಲ್ಲಾ ಸ್ಪರ್ಧೆಗಳಿಗೆ ತಂಡವನ್ನು ಸ್ಥಳದಲ್ಲೇ ರಚನೆ ಮಾಡಲಾಗುವುದು., ಹಗ್ಗಜಗ್ಗಾಟ ಸ್ಪರ್ಧೆಗೆ ಏಳು ಜನರ ತಂಡವನ್ನು ರಚಿಸಿ ತರಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


