ಬಂಟ್ವಾಳ: 33 ವರ್ಷಗಳ ಇತಿಹಾಸ ಹೊಂದಿರುವ ಅವಿಭಜಿತ ದ.ಕ. ಜಿಲ್ಲೆಯ ಪ್ರತಿಷ್ಟಿತ ಶೈಕ್ಷಣಿಕ ಉತ್ತೇಜನಾ ಸೇವಾ ಸಂಸ್ಥೆ ಜಂಇಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಉದ್ಯಮಿ, ಸಂಘಟಕ, ಬರಹಗಾರ ರಶೀದ್ ವಿಟ್ಲ ಆಯ್ಕೆಯಾಗಿದ್ದಾರೆ.

ಮೆಲ್ಕಾರ್ ಎಂ.ಎಚ್. ಕಂಪೌಂಡಲ್ಲಿ ಸೆ.23 ರಂದು ನಡೆದ ಜಂಇಯತುಲ್ ಫಲಾಹ್ ಮಹಾಸಭೆಯಲ್ಲಿ 2022 ರಿಂದ 2024ನೇ ಸಾಲಿಗೆ ಈ ಆಯ್ಕೆ ನಡೆಯಿತು. ಜಿಲ್ಲಾ ಘಟಕದ ಉಸ್ತುವಾರಿಯಾಗಿ ಆಗಮಿಸಿದ ಸಲೀಮ್ ಹಂಡೇಲ್ ಆಯ್ಕೆ ಪ್ರಕ್ರಿಯೆ ನಡೆಸಿದರು.
ಆಡಳಿತಾಧಿಕಾರಿ ಜಮಾಲುದ್ದೀನ್, ವ್ಯವಸ್ಥಾಪಕರಾದ ಆದಮ್ ಅವರು ನೂತನ ಸಮಿತಿಯ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು. 21 ಸದಸ್ಯರ ನೂತನ ಸಮಿತಿಯನ್ನು ಅವಿರೋಧವಾಗಿ ಆರಿಸಲಾಯಿತು.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ಅಬ್ದುಲ್ಲತೀಫ್ ನೇರಳಕಟ್ಟೆ, ಶೇಖ್ ರಹ್ಮತುಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ. ಶಾಹುಲ್ ಹಮೀದ್, ಜೊತೆ ಕಾರ್ಯದರ್ಶಿಗಳಾಗಿ ಸುಲೈಮಾನ್ ಸೂರಿಕುಮೇರು, ಕೋಶಾಧಿಕಾರಿಯಾಗಿ ಎಂ.ಎಚ್. ಇಕ್ಬಾಲ್, ಸಂಘಟನಾ ಕಾರ್ಯದರ್ಶಿಯಾಗಿ ಪಿ. ಮಹಮ್ಮದ್, ಪತ್ರಿಕಾ ಕಾರ್ಯದರ್ಶಿಯಾಗಿ ಬಿ.ಎಂ. ತುಂಬೆ, ಕಾರ್ಯಕಾರೀ ಸದಸ್ಯರಾಗಿ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಹಾಜಿ ಆಲಡ್ಕ, ಎಫ್.ಎಂ. ಬಶೀರ್, ಅಬೂಬಕರ್ ನೋಟರಿ ವಿಟ್ಲ, ಮಹಮ್ಮದಲಿ ಎಸ್.ಎಂ., ಆಸಿಫ್ ಇಕ್ಬಾಲ್, ಹಾಜಿ ಉಸ್ಮಾನ್ ಕರೋಪಾಡಿ, ಅಬ್ದುಲ್ ರಝಾಕ್ ಅನಂತಾಡಿ, ಅಬ್ಬಾಸ್ ಅಲಿ ಬಿ.ಎಂ., ಎನ್. ಮಹಮ್ಮದ್, ಅಹ್ಮದ್ ಮುಸ್ತಫಾ ಗೋಳ್ತಮಜಲು, ಮಹಮ್ಮದ್ ವಳವೂರು, ಅಬ್ದುಲ್ ಹಕೀಂ ಕಲಾಯಿ ಆಯ್ಕೆಯಾದರು.




























