ವಿಟ್ಲ: ಮೂಲದ ಯುವಕ ರೈಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.

ವಿಟ್ಲ ಸಮೀಪದ ಕಡಂಬು ಪಿಲಿವಳಚ್ಚಿಲ್ ನಿವಾಸಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಶ್ರಫ್ ಉಸ್ಮಾನ್ ಎಂಬವರ ಪುತ್ರ ಮಹಮ್ಮದ್ ಅನಾಸ್ (19) ಮೃತ ಯುವಕ.
ಅನಾಸ್ ಎಸಿ ಮೆಕ್ಯಾನಿಕ್ ಆಗಿದ್ದು, ಕೇರಳದ ಕೊಚ್ಚಿಯಲ್ಲಿ ಟ್ರೈನಿಂಗ್ ಮುಗಿಸಿ ಊರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.


























