ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ‘ಕಾಂತಾರ’ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯ ಮೈ ಮೇಲೆ ದೈವ ಆವಾಹನೆ ಆಗಿದೆ.
ಸಿನಿಮಾ ನೋಡುತ್ತಿದ್ದ ಮಹಿಳೆ ಏಕಾಏಕಿ ದೈವ ಆವಾಹನೆ ಆದಂತೆ ವರ್ತಿಸಿದ್ದು, ಸ್ಥಳದಲ್ಲಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಮಹಿಳೆಯ ವರ್ತನೆ ಕಂಡು ಜನ ಗಾಬರಿಗೊಂಡಿದ್ದು, ಈ ವೇಳೆ ಕೂಡಲೇ ಸಿನಿಮಾವನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 10 ನಿಮಿಷದ ಬಳಿಕ ಮಹಿಳೆ ಚೇತರಿಸಿಕೊಂಡಿದ್ದು, ಮತ್ತೆ ಸಿನಿಮಾ ಮುಂದುವರಿಸಲಾಗಿದೆ.
‘ಕಾಂತಾರ’ ಸಿನಿಮಾದಲ್ಲಿ ಕರಾವಳಿ ಭಾಗದ ಕಂಬಳ ಹಾಗೂ ಭೂತಾರಾಧನೆಯನ್ನು ಹೈಲೈಟ್ ಮಾಡಲಾಗಿದೆ. ಅಲ್ಲದೇ ರಿಷಬ್ ಶೆಟ್ಟಿ ಭೂತಾರಾಧನೆ ವೇಷಭೂಷಣದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಷಭೂಷಣದಲ್ಲಿ ರಿಷಬ್ ಆಕರ್ಷಿಣೀಯವಾಗಿ ಕಾಣಿಸಿಕೊಂಡಿದ್ದು, ಕರಾವಳಿಯ ಪವಿತ್ರ ಆರಾಧನೆ ಭೂತಾರಾಧನೆಯ ಚಿತ್ರೀರಣದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ಸಹ ವಿಶೇಷ ಅನುಭವವಾಗಿದೆ ಎನ್ನಲಾಗಿದೆ..


























